ಭಕ್ತಿಸುಧೆ

ನೀನ್ಯಾಕೋ ನಿನ್ನ ಹಂಗ್ಯಾಕೋ

ನೀನ್ಯಾಕೊ ನಿನ್ನ ಹಂಗ್ಯಾಕೋ

ನಿನ್ನ ನಾಮದ ಬಲವೊಂದಿದಿದ್ದರೆ ಸಾಕೋ || ಪ ||

ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ

ಆದಿ ಮೂಲನೆಂಬ ನಾಮವೆ ಕಾಯ್ತೋ || 1 ||

ಪ್ರಹ್ಲಾದನ ಪಿತ ಬಾಧಿಸುತಿರುವಾಗ

ನರಹರಿಯೆಂಬ ನಾಮವೆ ಕಾಯ್ತೋ || ೨ ||

ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ

ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ || ೩ ||

ಯಮನ ದೂತರು ಬಂದು ಅಜಾಮಿಳನೆಳೆವಾಗ

ನಾರಾಯಣನೆಂಬ ನಾಮವೆ ಕಾಯ್ತೋ || ೪ ||

n>

ಆ ಮರ ಈ ಮರ ಧ್ಯಾನಿಸುತಿರುವಾಗ

ರಾಮ ನಾಮ ಎಂಬ ನಾಮವೆ ಕಾಯ್ತೋ || ೫ ||

ಹಸುಳೆ ಆ ಧ್ರುವರಾಯ ಅಡವಿಗೆ ಪೋವಾಗ

ವಾಸುದೇವನೆಂಬೊ ನಾಮವೆ ಕಾಯ್ತೋ || ೬ ||

ನಿನ್ನ ನಾಮಕೆ ಸರಿ ಕಾಣೆನು ಜಗದೊಳು

ಘನ ಮಹಿಮ ಸಿರಿ ಪುರಂದರ ವಿಠಲ || ೭ ||

ಹಂಚಿಕೊಳ್ಳಿ:
ದೈನಂದಿನ ಮನರಂಜನೆ & ಭಾಷಾ ಜ್ಞಾನ ಇಂದಿನ ಆಟಗಳು

ಇಂದಿನ ಕನ್ನಡ ಪದ ಆಟಗಳು ಆಡಿ ನೋಡಿ!

ಕನ್ನಡ ಪದ ಸಂಪತ್ತು ಹೆಚ್ಚಿಸಿಕೊಳ್ಳಲು ಮತ್ತು ಮೆದುಳಿಗೆ ಚುರುಕು ನೀಡಲು ಪ್ರತಿದಿನ ಹೊಸ ಅಕ್ಷರ ಚೌಕ, ಪದ ಸರಪಳಿ ಹಾಗೂ ಪದ ಜೋಡಿ ಆಟಗಳನ್ನು ಆಡಿ. ಶೂನ್ಯ ಟೈಪಿಂಗ್, ೧೦೦% ಸುಲಭ ಕೌಶಲ್ಯ ಆಟಗಳು.